
1st August 2025
ಕಾಸರಗೋಡು: ಬೆಂಗಳೂರಿನ ಏಷ್ಯಾನೆಟ್ ಸುವರ್ಣ ಸುದ್ದಿವಾಹಿನಿ ವತಿಯಿಂದ “ವೈದ್ಯರ ದಿನಾಚರಣೆ” ಅಂಗವಾಗಿ ಬೆಂಗಳೂರಿನ ಲಲಿತ್ ಸಭಾಂಗಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ “ಹೆಲ್ತ್ ಕೇರ್ ಎಕ್ಸಲೆನ್ಸ್” ಪ್ರಶಸ್ತಿ ಸ್ವೀಕರಿಸಿ ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ಇಂಟರ್ವೆನ್ಷನಲ್
ಕಾರ್ಡಿಯಾಲಜಿಸ್ಟ್ ಡಾ| ಎಚ್. ಪ್ರಭಾಕರ್ ಇವರಿಗೆ ಡಾ| ವಾಮನ್ ರಾವ್ ಬೇಕಲ್ ಸ್ಥಾಪಕ ಅಧ್ಯಕ್ಷರಾಗಿರುವ ಕನ್ನಡ ಭವನ ಕಾಸರಗೋಡು ಕೇಂದ್ರ ಸಮಿತಿ ಮತ್ತು ಡಾ| ರವೀಂದ್ರ ಜೆಪ್ಪು ಗೌರವಾಧ್ಯಕ್ಷರಾಗಿರುವ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಸಂಯುಕ್ತವಾಗಿ ಇವರ ನಿವಾಸ “
*ಚಿರಾಗ್ ಬಿ ಕ್ರಾಸ್ ರೋಡ್*,
*ವಾಸ್ ಲೇನ್*
*ಫಳ್ನಿರ್* 03.08.2025 ಭಾನುವಾರ ಸಂಜೆ 4.30 ಕ್ಕೆ ಅಭಿನಂದಿಸಿ ಗೌರವಿಸಲಿದೆ.
ಡಾ| ಎಚ್. ಪ್ರಭಾಕರ್ ಅವರು ಕರಾವಳಿ ಪ್ರದೇಶದಿಂದ ಈ ಪ್ರಶಸ್ತಿಗೆ ಆಯ್ಕೆಯಾದ ಪ್ರಥಮ ವೈದ್ಯರಾಗಿದ್ದಾರೆ. ಡಾ| ಪ್ರಭಾಕರ್ರವರು ಕರಾವಳಿ, ಮಲೆನಾಡು ಪ್ರದೇಶದ ಪ್ರಥಮ ಹಾಗೂ ಹಿರಿಯ ಇಂಟರ್ವೆನ್ಷನಲ್
ಕಾರ್ಡಿಯಾಲಜಿಸ್ಟ್ ಆಗಿದ್ದು ಕಳೆದ 25 ವರ್ಷಗಳಿಂದ ವೈದ್ಯಕೀಯ ಸೇವೆಯನ್ನು ಸಲ್ಲಿಸುವ ಮೂಲಕ ಸಾವಿರಾರು ಜನರಿಗೆ ಜೀವದಾನ ನೀಡಿದ ಸಾಧನೆ ಮಾಡಿದ್ದಾರೆ. ಇವರು “ಇಂಡ್ಯನ್ ಕಾಲೇಜ್ ಓಫ್ ಕಾರ್ಡಿಯಾಲಜಿ ಸಂಸ್ಥೆ”ಯ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇವರಿಗೆ ಕನ್ನಡ ಭವನ ಕಾಸರಗೋಡು ಹಾಗೂ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಇವರ ನಿವಾಸಕ್ಕೆ 3.8.2025 ಭಾನುವಾರ ಸಂಜೆ 4.30 ಕ್ಕೆ ತೆರಳಿ ಅಭಿನಂದಿಸಲಾಗುವುದು ಎಂದು ಕನ್ನಡ ಭವನದ ಸ್ಥಾಪಕರಾದ ಡಾ| ವಾಮನ್ ರಾವ್ ಬೇಕಲ್ ಹಾಗೂ ಕನ್ನಡ ಭವನ ದ.ಕ. ಜಿಲ್ಲಾದ್ಯಕ್ಷೆ ಶ್ರೀಮತಿ ರೇಖಾ ಸುದೇಶ್ ರಾವ್ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಳ ಮೀಸಲಾತಿ ಜಾರಿಗೊಳಿಸಲು ಅರೆ ಬೆತ್ತಲೆ ಮೆರವಣಿಗೆ ಮತ್ತು ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ಕೇಶ ಮುಂಡನ ಮಾಡಿಸಿಕೊಂಡು ಮಾದಿಗರಿಂದ ಭಾರಿ ಪ್ರತಿಭಟನೆ
ರಾಣಿ ಅಬ್ಬಕ್ಕದೇವಿಯ ಜೊತೆ ಪಯಣ - ಕೃತಿ ಲೋಕಾರ್ಪಣೆ ನಮ್ಮ ಪರಿಸರದ ಜ್ಞಾನ ಪಡೆಯದೆ ವಿದೇಶದವರ ಅಧ್ಯಯನ ಏತಕ್ಕೆ -ಸಿ.ಎ.ಗೋಕುಲದಾಸ ಪೈ